ಸುಂದರವಾಗಿ ನಡೆಯಿತು ಅಕ್ಷರನಾದ ಬಳಗದ ವಾರ್ಷಿಕೋತ್ಸವ
ಬೆಂಗಳೂರು: ಅಕ್ಷರನಾದ ಬಳಗದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಸಾರ್ಥಕವಾಗಿ ನೆರವೇರಿತು.

ಮುಖ್ಯಾಂಶಗಳು
- •ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತ್ಯ ಲೋಕದ ಹಿರಿಯರು ಶ್ರೀಮತಿ ಪಾರ್ವತಿ ಸಾಹಿತಿ ವಹಿಸಿಕೊಂಡಿದ್ದು, ರಾಜೇಗೌಡ, ವೆಂಕಟೇಶ್ ಸಂಪ, ಲೋಕೇಶ್ ಟಿ.ಕೆ., ಡಾ.
- •ಅಕ್ಷರ ನಾದ ಸಂಸ್ಥಾಪಕರಾದ ಶ್ರುತಿ ಮಧುಸೂದನ್ ಅವರು ಪ್ರಾಸ್ತಾವಿಕ ನುಡಿಯನ್ನು ನೀಡಿದರು.
- •ಕಾರ್ಯಕ್ರಮದ ವೇಳೆ ಸುಮಾರು 38 ಲೇಖಕರು ಹಾಗೂ ಕವಿಗಳ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
- •ಅದೇ ವೇಳೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರು:
ಅಕ್ಷರನಾದ ಬಳಗದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಸಾರ್ಥಕವಾಗಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತ್ಯ ಲೋಕದ ಹಿರಿಯರು ಶ್ರೀಮತಿ ಪಾರ್ವತಿ ಸಾಹಿತಿ ವಹಿಸಿಕೊಂಡಿದ್ದು, ರಾಜೇಗೌಡ, ವೆಂಕಟೇಶ್ ಸಂಪ, ಲೋಕೇಶ್ ಟಿ.ಕೆ., ಡಾ. ಇಮ್ಯಾನ್ಯುಯಲ್ ಸೇರಿದಂತೆ ಅನೇಕ ಗಣ್ಯರು ವೇದಿಕೆಯನ್ನು ಅಲಂಕರಿಸಿದ್ದರು.
ಅಕ್ಷರ ನಾದ ಸಂಸ್ಥಾಪಕರಾದ ಶ್ರುತಿ ಮಧುಸೂದನ್ ಅವರು ಪ್ರಾಸ್ತಾವಿಕ ನುಡಿಯನ್ನು ನೀಡಿದರು. ತೇಜಸ್ವಿನಿ ಸುನಿಲ್ ಕಾರ್ಯಕ್ರಮದ ಬೆನ್ನೆಲುಬಾಗಿ ಎಲ್ಲಾ ವ್ಯವಸ್ಥೆಗಳನ್ನು ನಿಭಾಯಿಸಿದ್ದು, ತಾರಾ ಸಂತೋಷ ಅವರು ಅತ್ಯುತ್ತಮ ನಿರೂಪಣೆಯಿಂದ ಕಾರ್ಯಕ್ರಮಕ್ಕೆ ಜೀವ ತುಂಬಿದರು.
ಕಾರ್ಯಕ್ರಮದ ವೇಳೆ ಸುಮಾರು 38 ಲೇಖಕರು ಹಾಗೂ ಕವಿಗಳ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಹೊಸ ಬರಹಗಾರರು ಬೆಳೆಯಬೇಕು, ಕನ್ನಡ ಸಾಹಿತ್ಯಕ್ಕೆ ಇನ್ನಷ್ಟು ಶ್ರೇಯಸ್ಸು ದೊರಕಬೇಕು ಎಂಬ ಆಶಯವನ್ನು ವೇದಿಕೆಯಲ್ಲಿದ್ದ ಗಣ್ಯರು ಹಂಚಿಕೊಂಡರು.
ಅದೇ ವೇಳೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಕ್ಷರನಾದ ಬಳಗವು ತನ್ನ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಹರ್ಷೋದ್ಗಾರದಿಂದ ಆಚರಿಸಿತು.
ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿ, ಕನ್ನಡ ಸಾಹಿತ್ಯದ ಪ್ರಗತಿಗೆ ಅಕ್ಷರನಾದ ನೀಡುತ್ತಿರುವ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
📢 ಸಂಪಾದಕೀಯ ತಿದ್ದುಪಡಿ ಮತ್ತು ಸ್ಪಷ್ಟೀಕರಣ:
ಈ ಸುದ್ದಿಯಲ್ಲಿ ತಪ್ಪು ಕಂಡುಬಂದರೆ ನಮ್ಮ ಸಂಪಾದಕೀಯ ತಂಡಕ್ಕೆ ತಿಳಿಸಿ, ನಾವು ಸರಿಪಡಿಸುತ್ತೇವೆ. ಇಮೇಲ್ ಮಾಡಿ: news@sirwar360.in ಅಥವಾ ಕರೆ ಮಾಡಿ: +91 94480 36036.
ಸಂಬಂಧಿತ ಸುದ್ದಿಗಳು
Bengaluruಡಿಸೆಂಬರ್ 25ರಿಂದ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ: 7 ರಾಜ್ಯಗಳನ್ನು ಸಂಚರಿಸುವ ರಥಯಾತ್ರೆಗೆ ಚಾಲನೆ
ಬೆಂಗಳೂರು: ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಡಿಸೆಂಬರ್ 25 ರಿಂದ ಡಿಸೆಂಬರ್ 28 ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ…
Bengaluruಅಕ್ಷರನಾದದ ಪುಸ್ತಕ ಹಬ್ಬದಲ್ಲಿ ಹಿರಿ-ಕಿರಿಯ ಸಾಹಿತಿಗಳ ಪುಸ್ತಕ ಬಿಡುಗಡೆ
ಬೆಂಗಳೂರು: ಅಕ್ಷರನಾದ ಪಬ್ಲಿಕೇಶನ್ಸ್ ಬೆಂಗಳೂರು ಇವರು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಿರಿ-ಕಿರಿಯ ಸಾಹಿತಿಗಳ ಪುಸ್ತಕಗಳು…


