ಬ್ರೇಕಿಂಗ್
ವಿವಾಹಿತ ಧರ್ಮಗುರುವಿನೊಂದಿಗೆ ತೆರಳಿದ ಯುವತಿ; ಠಾಣೆಯಲ್ಲೇ ಕಣ್ಣೀರಿಟ್ಟ ಪೋಷಕರು!•ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಮಗು ಜನನ•ಕುಮಾರಧಾರೆಯ ಜಲಜಾಗೃತಿಗೆ ಸಂದ ಜಯ: ಉರುಂಬಿ ತಟದಲ್ಲಿ 'ಪಶ್ಚಿಮ ಘಟ್ಟ ಜೀವವೈವಿಧ್ಯ ಸಂರಕ್ಷಣಾ' ಸಂಕಲ್ಪದ ಶಂಖನಾದ•ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು•ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ & ಎಂ.ಎಚ್. ನಾಗರಾಜು•ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!•ಕಚ್ಚಾ ತೈಲದ ಬೆಲೆ ತೀವ್ರ ಕುಸಿತ& ಆದರೆ ಜನತೆಗಿಲ್ಲ ಇಳಿಕೆಯ ಲಾಭ ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ? ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ವಿವಾಹಿತ ಧರ್ಮಗುರುವಿನೊಂದಿಗೆ ತೆರಳಿದ ಯುವತಿ; ಠಾಣೆಯಲ್ಲೇ ಕಣ್ಣೀರಿಟ್ಟ ಪೋಷಕರು!•ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಮಗು ಜನನ•ಕುಮಾರಧಾರೆಯ ಜಲಜಾಗೃತಿಗೆ ಸಂದ ಜಯ: ಉರುಂಬಿ ತಟದಲ್ಲಿ 'ಪಶ್ಚಿಮ ಘಟ್ಟ ಜೀವವೈವಿಧ್ಯ ಸಂರಕ್ಷಣಾ' ಸಂಕಲ್ಪದ ಶಂಖನಾದ•ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು•ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ & ಎಂ.ಎಚ್. ನಾಗರಾಜು•ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!•ಕಚ್ಚಾ ತೈಲದ ಬೆಲೆ ತೀವ್ರ ಕುಸಿತ& ಆದರೆ ಜನತೆಗಿಲ್ಲ ಇಳಿಕೆಯ ಲಾಭ ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ? ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•
ಮಾರುಕಟ್ಟೆ ದರ
🪙ಚಿನ್ನ 24K (10 ಗ್ರಾಂ):₹78,450+320•
💍ಚಿನ್ನ 22K (10 ಗ್ರಾಂ):₹71,900+290•
🥈ಬೆಳ್ಳಿ (1 ಕೆಜಿ):₹96,200-450•
⛽ಪೆಟ್ರೋಲ್ (ರಾಯಚೂರು):₹103.12(0)•
🛢️ಡೀಸೆಲ್ (ರಾಯಚೂರು):₹89.20+0.12•
📈ಸೆನ್ಸೆಕ್ಸ್:81,245+0.8%•
📊ನಿಫ್ಟಿ 50:24,610+0.6%•
💵ಡಾಲರ್ (USD):₹84.10-0.05•
🪙ಚಿನ್ನ 24K (10 ಗ್ರಾಂ):₹78,450+320•
💍ಚಿನ್ನ 22K (10 ಗ್ರಾಂ):₹71,900+290•
🥈ಬೆಳ್ಳಿ (1 ಕೆಜಿ):₹96,200-450•
⛽ಪೆಟ್ರೋಲ್ (ರಾಯಚೂರು):₹103.12(0)•
🛢️ಡೀಸೆಲ್ (ರಾಯಚೂರು):₹89.20+0.12•
📈ಸೆನ್ಸೆಕ್ಸ್:81,245+0.8%•
📊ನಿಫ್ಟಿ 50:24,610+0.6%•
💵ಡಾಲರ್ (USD):₹84.10-0.05•
ಜಾಹೀರಾತುAdvertisement

ಮಂಗಳೂರಿನ ತಂತ್ರಜ್ಞಾನ ಸಮಾವೇಶದಲ್ಲಿ ಶಿರಸಿಯ ಪ್ರೊಭಾರತ್ ಸಂಸ್ಥೆಗೆ ವಿಶೇಷ ಗೌರವ

ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸ್ವದೇಶಿ ತ್ರಿಡಿ ಮುದ್ರಕ ಯಂತ್ರವನ್ನು ಸಮಾವೇಶದಲ್ಲಿ ಪ್ರದರ್ಶಿಸಲಾಯಿತು.

ಬಸವರಾಜ ಹಿರೇಮಠ ✔•ನವೆಂ 7,2026, 12:50 PM
👁3.5K ವೀಕ್ಷಣೆ1 ನಿಮಿಷ ಓದು
ಮಂಗಳೂರಿನ ತಂತ್ರಜ್ಞಾನ ಸಮಾವೇಶದಲ್ಲಿ ಶಿರಸಿಯ ಪ್ರೊಭಾರತ್ ಸಂಸ್ಥೆಗೆ ವಿಶೇಷ ಗೌರವ

ಮುಖ್ಯಾಂಶಗಳು

  • •ಇದರೊಂದಿಗೆ ತ್ರಿಡಿ ಮುದ್ರಣ, ತ್ರಿಡಿ ಸ್ಕ್ಯಾನಿಂಗ್, ಗಣಕೀಕೃತ ರೇಖಾಚಿತ್ರ ವಿನ್ಯಾಸಕಾರರು, ಮುದ್ರಕ ಮಾಲೀಕರು, ಸೇವಾದಾತರು ಹಾಗೂ ಗ್ರಾಹಕರನ್ನು ಒಂದೇ ಡಿಜಿಟಲ್ ಮಾರುಕಟ್ಟೆ ವೇದಿಕೆಯಲ್ಲಿ ಸಂಪರ್ಕಿಸುವ ಜಾಲವನ್ನು ಸಂಸ್ಥೆ ರೂಪಿಸುತ್ತಿದೆ.
  • •"ಶಿರಸಿಯಂತಹ ಗ್ರಾಮೀಣ ಭಾಗದಿಂದ ಜಾಗತಿಕ ಗುಣಮಟ್ಟದ ಸ್ವದೇಶಿ ತಂತ್ರಜ್ಞಾನ ರೂಪಿಸುವ ನಮ್ಮ ಪ್ರಯತ್ನಕ್ಕೆ ಸರ್ಕಾರದ ‘ಎಲಿವೇಟ್’ ಯೋಜನೆ ಹಾಗೂ ‘ಬಿಯಾಂಡ್ ಬೆಂಗಳೂರು’ ವೇದಿಕೆ ದೊಡ್ಡ ಉತ್ತೇಜನ ನೀಡಿದೆ.
  • •ಕಾರ್ಯಕ್ರಮ ಹಾಗೂ ಪ್ರದರ್ಶನದಲ್ಲಿ ಸಂಸ್ಥೆಯ ಪ್ರಮುಖರಾದ ವಿಶ್ವ ಹೆಗಡೆ, ರಿತೇಶ್‌ರಾಜ್ ಹಿರಾಸ್ಕರ್ ಹಾಗೂ ನಿತಿನ್ ನಾಯ್ಕ ಉಪಸ್ಥಿತರಿದ್ದರು.

ಶಿರಸಿ:

ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಹಯೋಗದಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಮಂಗಳೂರು ಟೆಕ್ನೋವಾನ್ಜಾ–೨೦೨೬’ ಸಮಾವೇಶದಲ್ಲಿ ಶಿರಸಿ ಮೂಲದ ‘ಪ್ರೊಭಾರತ್ ಟೆಕ್ನಾಲಜೀಸ್’ ಸಂಸ್ಥೆಗೆ ವಿಶೇಷ ಗೌರವ ಸಂದಿದೆ.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ‘ಎಲಿವೇಟ್’ ಯೋಜನೆಯ ವಿಜೇತ ಸಂಸ್ಥೆಯಾಗಿರುವ ಪ್ರೊಭಾರತ್ ಟೆಕ್ನಾಲಜೀಸ್‌ನ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುಳಗೋಳದ ಪ್ರವರ್ ಹೆಗಡೆ ಅವರನ್ನು ಸಮಾವೇಶದ ಮುಖ್ಯ ವೇದಿಕೆಯಲ್ಲಿ ಕೆಡಿಇಎಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಕುಮಾರ್ ಗುಪ್ತಾ ಅವರು ಸನ್ಮಾನಿಸಿ ಗೌರವಿಸಿದರು.

ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸ್ವದೇಶಿ ತ್ರಿಡಿ ಮುದ್ರಕ ಯಂತ್ರವನ್ನು ಸಮಾವೇಶದಲ್ಲಿ ಪ್ರದರ್ಶಿಸಲಾಯಿತು. ಈ ಸಾಧನವು ಕೇವಲ ತ್ರಿಡಿ ಮಾದರಿಗಳ ಮುದ್ರಣಕ್ಕೆ ಮಾತ್ರ ಸೀಮಿತವಾಗಿರದೆ, ಮುದ್ರಿತ ವಿದ್ಯುನ್ಮಂಡಲಗಳ (ಸರ್ಕ್ಯೂಟ್ ಬೋರ್ಡ್) ಪ್ರಾಯೋಗಿಕ ಮಾದರಿ ನಿರ್ಮಾಣ ಹಾಗೂ ಉತ್ಪಾದನೆಯಂತಹ ತಾಂತ್ರಿಕ ಕಾರ್ಯಗಳನ್ನು ಒಂದೇ ಯಂತ್ರದಲ್ಲಿ ನಿರ್ವಹಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಇದರೊಂದಿಗೆ ತ್ರಿಡಿ ಮುದ್ರಣ, ತ್ರಿಡಿ ಸ್ಕ್ಯಾನಿಂಗ್, ಗಣಕೀಕೃತ ರೇಖಾಚಿತ್ರ ವಿನ್ಯಾಸಕಾರರು, ಮುದ್ರಕ ಮಾಲೀಕರು, ಸೇವಾದಾತರು ಹಾಗೂ ಗ್ರಾಹಕರನ್ನು ಒಂದೇ ಡಿಜಿಟಲ್ ಮಾರುಕಟ್ಟೆ ವೇದಿಕೆಯಲ್ಲಿ ಸಂಪರ್ಕಿಸುವ ಜಾಲವನ್ನು ಸಂಸ್ಥೆ ರೂಪಿಸುತ್ತಿದೆ. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ವಿನ್ಯಾಸ ನೆರವು ಹಾಗೂ ಸ್ವಯಂಚಾಲಿತ ಉತ್ಪಾದನಾ ವ್ಯವಸ್ಥೆಯನ್ನು ಈ ಜಾಲದಲ್ಲಿ ಅಳವಡಿಸುವ ಯೋಜನೆ ಹೊಂದಿದೆ.

"ಶಿರಸಿಯಂತಹ ಗ್ರಾಮೀಣ ಭಾಗದಿಂದ ಜಾಗತಿಕ ಗುಣಮಟ್ಟದ ಸ್ವದೇಶಿ ತಂತ್ರಜ್ಞಾನ ರೂಪಿಸುವ ನಮ್ಮ ಪ್ರಯತ್ನಕ್ಕೆ ಸರ್ಕಾರದ ‘ಎಲಿವೇಟ್’ ಯೋಜನೆ ಹಾಗೂ ‘ಬಿಯಾಂಡ್ ಬೆಂಗಳೂರು’ ವೇದಿಕೆ ದೊಡ್ಡ ಉತ್ತೇಜನ ನೀಡಿದೆ. ಭಾರತೀಯ ಉತ್ಪಾದನಾ ರಂಗಕ್ಕೆ ಅಗತ್ಯವಿರುವ ಸಂಪೂರ್ಣ ಡಿಜಿಟಲ್ ಉತ್ಪಾದನಾ ವ್ಯವಸ್ಥೆಯನ್ನು ಸ್ಥಳೀಯವಾಗಿಯೇ ಸ್ವದೇಶಿಯಾಗಿ ರೂಪಿಸುವುದು ನಮ್ಮ ಧ್ಯೇಯ," ಎಂದು ಪ್ರವರ್ ಹೆಗಡೆ ತಿಳಿಸಿದ್ದಾರೆ.

ಕಾರ್ಯಕ್ರಮ ಹಾಗೂ ಪ್ರದರ್ಶನದಲ್ಲಿ ಸಂಸ್ಥೆಯ ಪ್ರಮುಖರಾದ ವಿಶ್ವ ಹೆಗಡೆ, ರಿತೇಶ್‌ರಾಜ್ ಹಿರಾಸ್ಕರ್ ಹಾಗೂ ನಿತಿನ್ ನಾಯ್ಕ ಉಪಸ್ಥಿತರಿದ್ದರು.

ಜಾಹೀರಾತುAdvertisement

📢 ಸಂಪಾದಕೀಯ ತಿದ್ದುಪಡಿ ಮತ್ತು ಸ್ಪಷ್ಟೀಕರಣ:

ಈ ಸುದ್ದಿಯಲ್ಲಿ ತಪ್ಪು ಕಂಡುಬಂದರೆ ನಮ್ಮ ಸಂಪಾದಕೀಯ ತಂಡಕ್ಕೆ ತಿಳಿಸಿ, ನಾವು ಸರಿಪಡಿಸುತ್ತೇವೆ. ಇಮೇಲ್ ಮಾಡಿ: news@sirwar360.in ಅಥವಾ ಕರೆ ಮಾಡಿ: +91 94480 36036.

Comments (0)

Join or log in to comment.

    ನಮ್ಮ ವಾಟ್ಸಾಪ್ ಗುಂಪಿಗೆ ಸೇರಿ

    ತಾಜಾ ಸುದ್ದಿ ಮೊದಲು ನಿಮ್ಮ ಮೊಬೈಲ್‌ಗೆ.

    ಕ್ಷಣ ಕ್ಷಣದ ಸುದ್ದಿಸಂಪೂರ್ಣ ಉಚಿತವರದಿಗಾರರ ನೇರ ಅಪ್‌ಡೇಟ್
    ಈಗ ಸೇರಿ