ಬ್ರೇಕಿಂಗ್
ವಿವಾಹಿತ ಧರ್ಮಗುರುವಿನೊಂದಿಗೆ ತೆರಳಿದ ಯುವತಿ; ಠಾಣೆಯಲ್ಲೇ ಕಣ್ಣೀರಿಟ್ಟ ಪೋಷಕರು!•ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಮಗು ಜನನ•ಕುಮಾರಧಾರೆಯ ಜಲಜಾಗೃತಿಗೆ ಸಂದ ಜಯ: ಉರುಂಬಿ ತಟದಲ್ಲಿ 'ಪಶ್ಚಿಮ ಘಟ್ಟ ಜೀವವೈವಿಧ್ಯ ಸಂರಕ್ಷಣಾ' ಸಂಕಲ್ಪದ ಶಂಖನಾದ•ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು•ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ & ಎಂ.ಎಚ್. ನಾಗರಾಜು•ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!•ಕಚ್ಚಾ ತೈಲದ ಬೆಲೆ ತೀವ್ರ ಕುಸಿತ& ಆದರೆ ಜನತೆಗಿಲ್ಲ ಇಳಿಕೆಯ ಲಾಭ ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ? ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ವಿವಾಹಿತ ಧರ್ಮಗುರುವಿನೊಂದಿಗೆ ತೆರಳಿದ ಯುವತಿ; ಠಾಣೆಯಲ್ಲೇ ಕಣ್ಣೀರಿಟ್ಟ ಪೋಷಕರು!•ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಮಗು ಜನನ•ಕುಮಾರಧಾರೆಯ ಜಲಜಾಗೃತಿಗೆ ಸಂದ ಜಯ: ಉರುಂಬಿ ತಟದಲ್ಲಿ 'ಪಶ್ಚಿಮ ಘಟ್ಟ ಜೀವವೈವಿಧ್ಯ ಸಂರಕ್ಷಣಾ' ಸಂಕಲ್ಪದ ಶಂಖನಾದ•ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು•ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ & ಎಂ.ಎಚ್. ನಾಗರಾಜು•ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!•ಕಚ್ಚಾ ತೈಲದ ಬೆಲೆ ತೀವ್ರ ಕುಸಿತ& ಆದರೆ ಜನತೆಗಿಲ್ಲ ಇಳಿಕೆಯ ಲಾಭ ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ? ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•
ಮಾರುಕಟ್ಟೆ ದರ
🪙ಚಿನ್ನ 24K (10 ಗ್ರಾಂ):₹78,450+320•
💍ಚಿನ್ನ 22K (10 ಗ್ರಾಂ):₹71,900+290•
🥈ಬೆಳ್ಳಿ (1 ಕೆಜಿ):₹96,200-450•
⛽ಪೆಟ್ರೋಲ್ (ರಾಯಚೂರು):₹103.12(0)•
🛢️ಡೀಸೆಲ್ (ರಾಯಚೂರು):₹89.20+0.12•
📈ಸೆನ್ಸೆಕ್ಸ್:81,245+0.8%•
📊ನಿಫ್ಟಿ 50:24,610+0.6%•
💵ಡಾಲರ್ (USD):₹84.10-0.05•
🪙ಚಿನ್ನ 24K (10 ಗ್ರಾಂ):₹78,450+320•
💍ಚಿನ್ನ 22K (10 ಗ್ರಾಂ):₹71,900+290•
🥈ಬೆಳ್ಳಿ (1 ಕೆಜಿ):₹96,200-450•
⛽ಪೆಟ್ರೋಲ್ (ರಾಯಚೂರು):₹103.12(0)•
🛢️ಡೀಸೆಲ್ (ರಾಯಚೂರು):₹89.20+0.12•
📈ಸೆನ್ಸೆಕ್ಸ್:81,245+0.8%•
📊ನಿಫ್ಟಿ 50:24,610+0.6%•
💵ಡಾಲರ್ (USD):₹84.10-0.05•
ಜಾಹೀರಾತುAdvertisement

ದೇವರ ಕೋಣೆಗೆ ಬಂದ ನಾಗರಹಾವು: ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆ, ಸುರಕ್ಷಿತವಾಗಿ ಕಾಡಿಗೆ ವಾಪಾಸ್

ಹಾನಗಲ್: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಾನಗಲ್ ವಲಯ ವ್ಯಾಪ್ತಿಯ ಅರೆಗೊಪ್ಪಾ ಗ್ರಾಮದಲ್ಲಿ ಮನೆಯ ದೇವರ ಕೋಣೆಯೊಳಗೆ ನಾಗರಹಾವು ಕಾಣಿಸಿಕೊಂಡ ಘಟನೆ ಆತಂಕ ಸೃಷ್ಟಿಸಿತು.

ಅನಿಲ್ ಕುಲಕರ್ಣಿ ✔•ನವೆಂ 7,2026, 01:21 AM
👁4.6K ವೀಕ್ಷಣೆ1 ನಿಮಿಷ ಓದು
ದೇವರ ಕೋಣೆಗೆ ಬಂದ ನಾಗರಹಾವು: ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆ, ಸುರಕ್ಷಿತವಾಗಿ ಕಾಡಿಗೆ ವಾಪಾಸ್

ಮುಖ್ಯಾಂಶಗಳು

  • •ಆದರೆ ಅರಣ್ಯ ಇಲಾಖೆಯ ತ್ವರಿತ ಕಾರ್ಯಾಚರಣೆಯಿಂದ ಹಾವನ್ನು ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ರಕ್ಷಿಸಿ ಸಮೀಪದ ಕಾಡಿಗೆ ಬಿಡಲಾಯಿತು.
  • •ಮಾಹಿತಿ ದೊರೆಯುತ್ತಿದ್ದಂತೆಯೇ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರು ಸ್ಥಳಕ್ಕೆ ಧಾವಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ನಾಗರಹಾವನ್ನು ಯಶಸ್ವಿಯಾಗಿ ಹಿಡಿದು ರಕ್ಷಿಸಿದರು.
  • •ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
  • •ಅರಣ್ಯ ಇಲಾಖೆಯ ಸಮಯೋಚಿತ ಸ್ಪಂದನೆ ಹಾಗೂ ಹಾವಿನ ರಕ್ಷಣೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಾನಗಲ್:

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಾನಗಲ್ ವಲಯ ವ್ಯಾಪ್ತಿಯ ಅರೆಗೊಪ್ಪಾ ಗ್ರಾಮದಲ್ಲಿ ಮನೆಯ ದೇವರ ಕೋಣೆಯೊಳಗೆ ನಾಗರಹಾವು ಕಾಣಿಸಿಕೊಂಡ ಘಟನೆ ಆತಂಕ ಸೃಷ್ಟಿಸಿತು. ಆದರೆ ಅರಣ್ಯ ಇಲಾಖೆಯ ತ್ವರಿತ ಕಾರ್ಯಾಚರಣೆಯಿಂದ ಹಾವನ್ನು ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ರಕ್ಷಿಸಿ ಸಮೀಪದ ಕಾಡಿಗೆ ಬಿಡಲಾಯಿತು.

ಅರೆಗೊಪ್ಪಾ ಶಾಖೆಯ ಲೋಕೇಶ್ ಕೆಲೂರ್ ಅವರ ಮನೆಯಲ್ಲಿ ದೇವರ ಕೋಣೆಯೊಳಗೆ ನಾಗರಹಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ತಕ್ಷಣವೇ ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಮಾಹಿತಿ ದೊರೆಯುತ್ತಿದ್ದಂತೆಯೇ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರು ಸ್ಥಳಕ್ಕೆ ಧಾವಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ನಾಗರಹಾವನ್ನು ಯಶಸ್ವಿಯಾಗಿ ಹಿಡಿದು ರಕ್ಷಿಸಿದರು.

ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿ ಹಾವನ್ನು ಅದರ ನೈಸರ್ಗಿಕ ವಾಸಸ್ಥಾನವಾದ ಸಮೀಪದ ಕಾಡಿಗೆ ಸುರಕ್ಷಿತವಾಗಿ ಬಿಡಲಾಯಿತು. ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಈ ಕಾರ್ಯಾಚರಣೆಯಲ್ಲಿ ಲೋಕೇಶ್, ಪಕ್ಕಿರೇಶ್, ಚಿರಂಜೀವಿ ಹಾಗೂ ಪ್ರಿಯಾ ಅವರು ಸಹಕರಿಸಿದರು. ಅರಣ್ಯ ಇಲಾಖೆಯ ಸಮಯೋಚಿತ ಸ್ಪಂದನೆ ಹಾಗೂ ಹಾವಿನ ರಕ್ಷಣೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯ ಮನವಿ

ಅರಣ್ಯ ಇಲಾಖೆ ಸಾರ್ವಜನಿಕರಿಗೆ, ಮನೆ ಅಥವಾ ಸುತ್ತಮುತ್ತ ಹಾವುಗಳು ಕಂಡುಬಂದರೆ ಅವುಗಳನ್ನು ಹೊಡೆಯಲು ಅಥವಾ ಹಿಡಿಯಲು ಪ್ರಯತ್ನಿಸದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ. ಹಾವುಗಳೂ ಪರಿಸರದ ಜೀವವೈವಿಧ್ಯದ ಪ್ರಮುಖ ಭಾಗವಾಗಿದ್ದು, ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತುAdvertisement

📢 ಸಂಪಾದಕೀಯ ತಿದ್ದುಪಡಿ ಮತ್ತು ಸ್ಪಷ್ಟೀಕರಣ:

ಈ ಸುದ್ದಿಯಲ್ಲಿ ತಪ್ಪು ಕಂಡುಬಂದರೆ ನಮ್ಮ ಸಂಪಾದಕೀಯ ತಂಡಕ್ಕೆ ತಿಳಿಸಿ, ನಾವು ಸರಿಪಡಿಸುತ್ತೇವೆ. ಇಮೇಲ್ ಮಾಡಿ: news@sirwar360.in ಅಥವಾ ಕರೆ ಮಾಡಿ: +91 94480 36036.

Comments (0)

Join or log in to comment.

    ನಮ್ಮ ವಾಟ್ಸಾಪ್ ಗುಂಪಿಗೆ ಸೇರಿ

    ತಾಜಾ ಸುದ್ದಿ ಮೊದಲು ನಿಮ್ಮ ಮೊಬೈಲ್‌ಗೆ.

    ಕ್ಷಣ ಕ್ಷಣದ ಸುದ್ದಿಸಂಪೂರ್ಣ ಉಚಿತವರದಿಗಾರರ ನೇರ ಅಪ್‌ಡೇಟ್
    ಈಗ ಸೇರಿ