ಬ್ರೇಕಿಂಗ್
ವಿವಾಹಿತ ಧರ್ಮಗುರುವಿನೊಂದಿಗೆ ತೆರಳಿದ ಯುವತಿ; ಠಾಣೆಯಲ್ಲೇ ಕಣ್ಣೀರಿಟ್ಟ ಪೋಷಕರು!•ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಮಗು ಜನನ•ಕುಮಾರಧಾರೆಯ ಜಲಜಾಗೃತಿಗೆ ಸಂದ ಜಯ: ಉರುಂಬಿ ತಟದಲ್ಲಿ 'ಪಶ್ಚಿಮ ಘಟ್ಟ ಜೀವವೈವಿಧ್ಯ ಸಂರಕ್ಷಣಾ' ಸಂಕಲ್ಪದ ಶಂಖನಾದ•ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು•ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ & ಎಂ.ಎಚ್. ನಾಗರಾಜು•ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!•ಕಚ್ಚಾ ತೈಲದ ಬೆಲೆ ತೀವ್ರ ಕುಸಿತ& ಆದರೆ ಜನತೆಗಿಲ್ಲ ಇಳಿಕೆಯ ಲಾಭ ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ? ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ವಿವಾಹಿತ ಧರ್ಮಗುರುವಿನೊಂದಿಗೆ ತೆರಳಿದ ಯುವತಿ; ಠಾಣೆಯಲ್ಲೇ ಕಣ್ಣೀರಿಟ್ಟ ಪೋಷಕರು!•ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಗೆ ಮಗು ಜನನ•ಕುಮಾರಧಾರೆಯ ಜಲಜಾಗೃತಿಗೆ ಸಂದ ಜಯ: ಉರುಂಬಿ ತಟದಲ್ಲಿ 'ಪಶ್ಚಿಮ ಘಟ್ಟ ಜೀವವೈವಿಧ್ಯ ಸಂರಕ್ಷಣಾ' ಸಂಕಲ್ಪದ ಶಂಖನಾದ•ಬಸವಣ್ಣನವರೇ ಲಿಂಗಾಯತ ಧರ್ಮ ಸ್ಥಾಪಕರು•ದೇವಕನ್ನಿಕೆ ಶ್ರೀ ಬುಕ್ಕಪಟ್ಟಣದಮ್ಮನ ಅಧ್ಯಯನದ ಸುತ್ತಮುತ್ತ ಪುಸ್ತಕ ಪರಿಚಯ & ಎಂ.ಎಚ್. ನಾಗರಾಜು•ಪರಂಪರೆಯ ಕೂಪದಲ್ಲೇ ಇರುವ ಪುರುಷ ಪ್ರಜ್ಞೆ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರೇ ಅಧಿಕಾರ ಕೇಂದ್ರಗಳ ಉತ್ತರಾಧಿಕಾರಿಗಳಾದಾಗ !!!•ಕಚ್ಚಾ ತೈಲದ ಬೆಲೆ ತೀವ್ರ ಕುಸಿತ& ಆದರೆ ಜನತೆಗಿಲ್ಲ ಇಳಿಕೆಯ ಲಾಭ ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•ಚಿನ್ನ, ಬೆಳ್ಳಿ ದರಗಳ ನಾಗಾಲೋಟ: ಆರ್ಥಿಕ ಬಿಕ್ಕಟಿನ ಮುನ್ಸೂಚನೆ? ಎಸ್‌.ಆರ್‌.ವೆಂಕಟೇಶ್‌ ಪ್ರಸಾದ್•
ಮಾರುಕಟ್ಟೆ ದರ
🪙ಚಿನ್ನ 24K (10 ಗ್ರಾಂ):₹78,450+320•
💍ಚಿನ್ನ 22K (10 ಗ್ರಾಂ):₹71,900+290•
🥈ಬೆಳ್ಳಿ (1 ಕೆಜಿ):₹96,200-450•
⛽ಪೆಟ್ರೋಲ್ (ರಾಯಚೂರು):₹103.12(0)•
🛢️ಡೀಸೆಲ್ (ರಾಯಚೂರು):₹89.20+0.12•
📈ಸೆನ್ಸೆಕ್ಸ್:81,245+0.8%•
📊ನಿಫ್ಟಿ 50:24,610+0.6%•
💵ಡಾಲರ್ (USD):₹84.10-0.05•
🪙ಚಿನ್ನ 24K (10 ಗ್ರಾಂ):₹78,450+320•
💍ಚಿನ್ನ 22K (10 ಗ್ರಾಂ):₹71,900+290•
🥈ಬೆಳ್ಳಿ (1 ಕೆಜಿ):₹96,200-450•
⛽ಪೆಟ್ರೋಲ್ (ರಾಯಚೂರು):₹103.12(0)•
🛢️ಡೀಸೆಲ್ (ರಾಯಚೂರು):₹89.20+0.12•
📈ಸೆನ್ಸೆಕ್ಸ್:81,245+0.8%•
📊ನಿಫ್ಟಿ 50:24,610+0.6%•
💵ಡಾಲರ್ (USD):₹84.10-0.05•
ಜಾಹೀರಾತುAdvertisement

ದೀಪಾವಳಿಯ ದೀಪ ಬೆಳಗಲಿ, ಬೇಡ್ತಿಯ ಹರಿವು ಉಳಿಯಲಿ! ಬೇಡ್ತಿ–ವರದಾ ನದಿ ಜೋಡಣೆ ಬೇಡ; ಪಶ್ಚಿಮ ಘಟ್ಟಗಳ ಜೀವನಾಡಿಯನ್ನು ಉಳಿಸೋಣ!

ದೀಪಾವಳಿ ಎಂದರೆ ಕತ್ತಲೆಯ ಮೇಲೆ ಬೆಳಕಿನ ಜಯ.

ರೇಣುಕಾ ಪೂಜಾರ ✔•ನವೆಂ 6,2026, 07:52 PM
👁5.5K ವೀಕ್ಷಣೆ3 ನಿಮಿಷ ಓದು
ದೀಪಾವಳಿಯ ದೀಪ ಬೆಳಗಲಿ, ಬೇಡ್ತಿಯ ಹರಿವು ಉಳಿಯಲಿ! ಬೇಡ್ತಿ–ವರದಾ ನದಿ ಜೋಡಣೆ ಬೇಡ; ಪಶ್ಚಿಮ ಘಟ್ಟಗಳ ಜೀವನಾಡಿಯನ್ನು ಉಳಿಸೋಣ!

ಮುಖ್ಯಾಂಶಗಳು

  • •ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ನೆನಪಿಸುವ ಹಬ್ಬ.
  • •ನಮ್ಮ ಮನೆಗಳನ್ನು ಬೆಳಗಿಸುವ ಸಂಭ್ರಮದಲ್ಲಿ ನಮ್ಮ ನೆಲದ ನದಿಗಳ ಬೆಳಕನ್ನೇ ಆರಿಸುತ್ತಿದ್ದೇವೆಯೇ?
  • •ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಮೂಲಕ ಪಶ್ಚಿಮಾಭಿಮುಖವಾಗಿ ಹರಿಯುವ ನದಿಯ ನೀರನ್ನು ಪೂರ್ವದ ಬಯಲುಸೀಮೆಗೆ ವರ್ಗಾಯಿಸುವ ಪ್ರಸ್ತಾವನೆ ನಮ್ಮ ಮುಂದಿದೆ.
  • •ಅವರ ಸಂಕಷ್ಟವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ.

ಡಾ. ರವಿಕಿರಣ ಪಟವರ್ಧನ .
---

ದೀಪಾವಳಿ ಎಂದರೆ ಕತ್ತಲೆಯ ಮೇಲೆ ಬೆಳಕಿನ ಜಯ. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ನೆನಪಿಸುವ ಹಬ್ಬ. ಮನೆಮನೆಗಳಲ್ಲಿ ಹಣತೆ ಬೆಳಗಿಸಿ, ಸಂತೋಷ ಮತ್ತು ಸಮೃದ್ಧಿಯನ್ನು ಸ್ವಾಗತಿಸುವ ಸಂಭ್ರಮದ ದಿನಗಳು.ಆದರೆ ಈ ದೀಪಾವಳಿಯಲ್ಲಿ ಉತ್ತರ ಕನ್ನಡದ ಜನರ ಮುಂದೆ ಒಂದು ಗಂಭೀರ ಪ್ರಶ್ನೆಯಿದೆ. ನಮ್ಮ ಮನೆಗಳನ್ನು ಬೆಳಗಿಸುವ ಸಂಭ್ರಮದಲ್ಲಿ ನಮ್ಮ ನೆಲದ ನದಿಗಳ ಬೆಳಕನ್ನೇ ಆರಿಸುತ್ತಿದ್ದೇವೆಯೇ?
ಪಶ್ಚಿಮ ಘಟ್ಟಗಳ ಮಡಿಲಲ್ಲಿ ಹುಟ್ಟಿ, ಕಾಡು, ಬೆಟ್ಟ, ಹಳ್ಳಿಗಳ ಮೂಲಕ ಹರಿದು ಅರಬ್ಬಿ ಸಮುದ್ರ ಸೇರುವ ಬೇಡ್ತಿ ನದಿಯ ಭವಿಷ್ಯ ಇಂದು ಚರ್ಚೆಯ ವಿಷಯವಾಗಿದೆ. 

ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಮೂಲಕ ಪಶ್ಚಿಮಾಭಿಮುಖವಾಗಿ ಹರಿಯುವ ನದಿಯ ನೀರನ್ನು ಪೂರ್ವದ ಬಯಲುಸೀಮೆಗೆ ವರ್ಗಾಯಿಸುವ ಪ್ರಸ್ತಾವನೆ ನಮ್ಮ ಮುಂದಿದೆ.

ಉತ್ತರ ಕರ್ನಾಟಕದ ಜನರಿಗೆ ನೀರು ಬೇಕು. ಕುಡಿಯುವ ನೀರು ಬೇಕು, ಕೃಷಿಗೆ ನೀರು ಬೇಕು. ಅವರ ಸಂಕಷ್ಟವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಆದರೆ ಒಂದು ಪ್ರದೇಶದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಾಗ ಮತ್ತೊಂದು ಪ್ರದೇಶದ ನೈಸರ್ಗಿಕ ಜಲಸಂಪತ್ತನ್ನೇ ಅಪಾಯಕ್ಕೆ ಸಿಲುಕಿಸುವುದು ನ್ಯಾಯವೇ?

 ನದಿ ಎಂದರೆ ಕೇವಲ ನೀರಿನ ಹರಿವಲ್ಲ!
ಬೇಡ್ತಿ ಎಂದರೆ ಕೇವಲ ನೀರಿನ ಮೂಲವಲ್ಲ. ಅದು ಸಾವಿರಾರು ಜೀವಿಗಳ ಬದುಕು. ಕಾಡು, ಪ್ರಾಣಿ, ಪಕ್ಷಿ, ಮೀನು, ಕೃಷಿ, ಹಳ್ಳಿಗಳು ಮತ್ತು ಸಮುದ್ರದ ನಡುವಿನ ನೈಸರ್ಗಿಕ ಸಂಬಂಧದ ಕೊಂಡಿ.ಅಘನಾಶಿನಿ, ಶರಾವತಿ, ನೇತ್ರಾವತಿ, ಬೇಡ್ತಿ–ಗಂಗಾವಳಿ ಇವೆಲ್ಲವೂ ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಯೊಂದಿಗೆ ಬೆಸೆದುಕೊಂಡಿರುವ ನದಿಗಳು.

ಇವುಗಳ ನೀರನ್ನು ಕೇವಲ ಟಿಎಂಸಿ ಅಡಿ ಅಥವಾ ಮಿಲಿಯನ್ ಕ್ಯೂಬಿಕ್ ಮೀಟರ್‌ಗಳ ಲೆಕ್ಕದಲ್ಲಿ ಅಳೆಯಲು ಸಾಧ್ಯವೇ? ನದಿಯ ನೀರಿನ ಪ್ರಮಾಣದ ಜೊತೆಗೆ ಅದರ ಸಹಜ ಹರಿವು, ಜಲಾನಯನ ಪ್ರದೇಶ, ಅಂತರ್ಜಲ ಮರುಪೂರಣ, ಜೀವವೈವಿಧ್ಯ ಮತ್ತು ಸಮುದ್ರದ ಪರಿಸರದ ಮೇಲಿನ ಪರಿಣಾಮಗಳನ್ನೂ ಪರಿಗಣಿಸಬೇಕಲ್ಲವೇ?

ಮೊದಲು ನದಿಯ ನಿಜವಾದ ನೀರಿನ ಲೆಕ್ಕ ಹೇಳಿ!
ಬೇಸಿಗೆಯಲ್ಲಿ ಎಷ್ಟು ನೀರು ಲಭ್ಯವಿದೆ? ಬರಗಾಲದ ವರ್ಷಗಳಲ್ಲಿ ನದಿಯ ಹರಿವು ಎಷ್ಟಿರುತ್ತದೆ? ಪರಿಸರದ ಕನಿಷ್ಠ ಹರಿವಿಗೆ ಎಷ್ಟು ನೀರು ಅಗತ್ಯ? ಇಂತಹ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರ ಸಿಗುವ ಮೊದಲು ನೀರನ್ನು ವರ್ಗಾಯಿಸುವ ನಿರ್ಧಾರ ಹೇಗೆ ಸಮರ್ಥನೀಯವಾಗುತ್ತದೆ?ದೀರ್ಘಕಾಲದ ನೈಜ ಹರಿವಿನ ದಾಖಲೆಗಳು, ಬೇಸಿಗೆ ಮತ್ತು ಬರಗಾಲದ ಅಂಕಿಅಂಶಗಳು, ಸ್ವತಂತ್ರ ಜಲವೈಜ್ಞಾನಿಕ ಅಧ್ಯಯನ ಮತ್ತು ಪರಿಸರದ ಕನಿಷ್ಠ ಹರಿವಿನ ಮೌಲ್ಯಮಾಪನ ಸಾರ್ವಜನಿಕರ ಮುಂದಿರಬೇಕು.ಕಾಗದದ ಮೇಲಿನ ಅಂದಾಜುಗಳಿಗಾಗಿ ನದಿಯ ಭವಿಷ್ಯವನ್ನು ಬಲಿಕೊಡಬಾರದು.

ಪಶ್ಚಿಮ ಘಟ್ಟಗಳು ಇಡೀ ದೇಶದ ಜೀವನಾಡಿ!

ಪಶ್ಚಿಮ ಘಟ್ಟಗಳು ಕೇವಲ ಉತ್ತರ ಕನ್ನಡದ ಆಸ್ತಿಯಲ್ಲ. ಕರ್ನಾಟಕದ ಆಸ್ತಿಯೂ ಅಲ್ಲ. ಇಡೀ ದೇಶದ ಪರಿಸರ ಸಮತೋಲನಕ್ಕೆ ಅತ್ಯಂತ ಮಹತ್ವದ ನೈಸರ್ಗಿಕ ಸಂಪತ್ತು.
ಇಲ್ಲಿನ ಕಾಡುಗಳು ಮಳೆಯ ನೀರನ್ನು ಹಿಡಿದಿಡುತ್ತವೆ. ನದಿಗಳಿಗೆ ಜೀವ ತುಂಬುತ್ತವೆ. ಅಂತರ್ಜಲವನ್ನು ಮರುಪೂರಣ ಮಾಡುತ್ತವೆ. ಅನೇಕ ಜೀವಜಂತುಗಳಿಗೆ ಆಶ್ರಯ ನೀಡುತ್ತವೆ.ಒಂದು ನದಿಯ ಹರಿವಿನಲ್ಲಿ ಹಸ್ತಕ್ಷೇಪ ಮಾಡುವುದೆಂದರೆ ಕೇವಲ ನೀರಿನ ದಿಕ್ಕನ್ನು ಬದಲಿಸುವುದಲ್ಲ. ಒಂದು ಸಂಪೂರ್ಣ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಅಭಿವೃದ್ಧಿಯ ಹೆಸರಿನಲ್ಲಿ ಉತ್ತರ ಕನ್ನಡಕ್ಕೆ ಮಹಾಪೂರವೇ?
ಇಲ್ಲಿ ಇನ್ನೊಂದು ವಿಚಾರವನ್ನೂ ನಾವು ಗಂಭೀರವಾಗಿ ಯೋಚಿಸಬೇಕಿದೆ.ಉತ್ತರ ಕರ್ನಾಟಕದ ಬಯಲುಸೀಮೆಗೆ ನೀರಿನ ಕೊರತೆಯಿದೆ ಎಂಬ ಕಾರಣಕ್ಕೆ ಉತ್ತರ ಕನ್ನಡದ ನದಿಗಳ ನೀರನ್ನು ಬೇರೆಡೆಗೆ ಕೊಂಡೊಯ್ಯುವ ಯೋಜನೆಗಳು ಬರುತ್ತಿವೆ. ಹಾಗಾದರೆ ನಾಳೆ ಉತ್ತರ ಕನ್ನಡದ ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಜಿಲ್ಲೆಗೆ ಯಾವೆಲ್ಲ ಯೋಜನೆಗಳು ಬರಬಹುದು?
ನಮ್ಮ ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿಗಳು ಬೇಡವೇ? ರಾಜ್ಯ ಹೆದ್ದಾರಿಗಳು ಬೇಡವೇ? ರೈಲ್ವೆ ಮಾರ್ಗಗಳು ಬೇಡವೇ? ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಕಾಡು, ಬೆಟ್ಟ, ನದಿ, ಪರಿಸರ ಎಲ್ಲವನ್ನೂ ಬದಲಾಯಿಸುವ ಯೋಜನೆಗಳು ಸಾಲುಸಾಲಾಗಿ ಬಂದರೆ ನಾವು ಏನು ಮಾಡಬೇಕು?

ಕೊನೆಗೆ ನಮ್ಮ ಊರುಗಳಿಗೆ ರಸ್ತೆ ಸಂಪರ್ಕವೂ ಸರಿಯಾಗಿ ಉಳಿಯದೆ, ರೈಲು ಮಾರ್ಗಗಳೂ ಇಲ್ಲದೆ, ಸಣ್ಣಪುಟ್ಟ ಹೆಲಿಕಾಪ್ಟರ್ ನಿಲ್ದಾಣಗಳನ್ನು ನಿರ್ಮಿಸಿ, ಊರಿನಿಂದ ಊರಿಗೆ ಹೆಲಿಕಾಪ್ಟರ್ ಸೇವೆ ಆರಂಭಿಸಬೇಕಾದ ಪರಿಸ್ಥಿತಿ ಬರದಿರಲಿ ಎಂದು ಪ್ರಾರ್ಥಿಸಬೇಕಾದೀತು!
ಇದು ಕೇವಲ ವ್ಯಂಗ್ಯದ ಮಾತಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಡೆಯುವ ನಿರಂತರ ಹಸ್ತಕ್ಷೇಪದ ಬಗ್ಗೆ ಇರುವ ಆತಂಕ.

ನಮಗೆ ಅಭಿವೃದ್ಧಿ ಬೇಡ ಎಂದಲ್ಲ. ರಾಷ್ಟ್ರೀಯ ಹೆದ್ದಾರಿಗಳು ಬೇಕು, ರಾಜ್ಯ ಹೆದ್ದಾರಿಗಳು ಬೇಕು, ರೈಲ್ವೆ ಸಂಪರ್ಕ ಬೇಕು, ಕೈಗಾರಿಕೆಗಳು ಬೇಕು, ಉದ್ಯೋಗಗಳು ಬೇಕು. ನಮ್ಮ ಯುವಜನರು ಉದ್ಯೋಗಕ್ಕಾಗಿ ಊರು ಬಿಡುವ ಪರಿಸ್ಥಿತಿ ಬದಲಾಗಬೇಕು. ಪ್ರವಾಸೋದ್ಯಮ ಬೆಳೆಯಬೇಕು. ಕೃಷಿ ಅಭಿವೃದ್ಧಿಯಾಗಬೇಕು.
ಆದರೆ ಅಭಿವೃದ್ಧಿ ಎಂದರೆ ನಮ್ಮ ನೆಲದ ಅಸ್ತಿತ್ವವನ್ನೇ ಕಳೆದುಕೊಳ್ಳುವುದಲ್ಲ.

ಉತ್ತರ ಕನ್ನಡಕ್ಕೆ ಅಭಿವೃದ್ಧಿ ಬೇಕು. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಉತ್ತರ ಕನ್ನಡವೇ ಉಳಿಯದಂತಾಗಬಾರದು!
ನಮ್ಮ ನದಿಗಳನ್ನು ಬೇರೆಡೆಗೆ ಕೊಂಡೊಯ್ದು, ನಮ್ಮ ಕಾಡುಗಳನ್ನು ಕಡಿದು, ನಮ್ಮ ಬೆಟ್ಟಗಳನ್ನು ಸೀಳಿ, ನಮ್ಮ ಪರಿಸರವನ್ನು ಹಾಳುಮಾಡಿ ಸಾಧಿಸುವ ಅಭಿವೃದ್ಧಿ ನಮಗೆ ಬೇಡ.ಬಯಲುಸೀಮೆಯ ಬಾಯಾರಿಕೆಗೆ ಮಲೆನಾಡನ್ನು ಬರಿದು ಮಾಡುವುದು ಪರಿಹಾರವಾಗಬಾರದು. ಸ್ಥಳೀಯ ಜಲಸಂರಕ್ಷಣೆ, ಕೆರೆಕಟ್ಟೆಗಳ ಪುನಶ್ಚೇತನ, ಮಳೆನೀರು ಸಂಗ್ರಹ, ಅರಣ್ಯ ಪುನರುಜ್ಜೀವನ ಮತ್ತು ವೈಜ್ಞಾನಿಕ ನೀರಿನ ನಿರ್ವಹಣೆಗೆ ಆದ್ಯತೆ ನೀಡಬೇಕು.ಒಂದು ಪ್ರದೇಶದ ಅಭಿವೃದ್ಧಿ ಮತ್ತೊಂದು ಪ್ರದೇಶದ ವಿನಾಶದ ಮೇಲೆ ನಿಂತಿರಬಾರದು.

* ಬೇಡ್ತಿ–ವರದಾ ಮತ್ತು ಅಘನಾಶಿನಿ–ವೇದಾವತಿ ನದಿ ಜೋಡಣೆ ಪ್ರಸ್ತಾವನೆಗಳನ್ನು ರದ್ದುಗೊಳಿಸಬೇಕು.
* ಸ್ವತಂತ್ರ ಹಾಗೂ ಸಮಗ್ರ ಜಲವೈಜ್ಞಾನಿಕ ಅಧ್ಯಯನ ಪೂರ್ಣಗೊಳ್ಳುವವರೆಗೆ DPR ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು.
* ಕನಿಷ್ಠ 20 ವರ್ಷಗಳ ವಿಶ್ವಾಸಾರ್ಹ ನದಿ ಹರಿವಿನ ದಾಖಲೆಗಳು, ವಿಶೇಷವಾಗಿ ಬೇಸಿಗೆ ಮತ್ತು ಬರಗಾಲದ ಮಾಹಿತಿಯನ್ನು ಪರಿಶೀಲಿಸಬೇಕು.
* ಪರಿಸರದ ಕನಿಷ್ಠ ಹರಿವು, ಜೀವವೈವಿಧ್ಯ, ಅರಣ್ಯ ನಾಶ ಮತ್ತು ಸ್ಥಳೀಯ ಜನಜೀವನದ ಮೇಲಿನ ಪರಿಣಾಮಗಳ ಅಧ್ಯಯನ ನಡೆಸಬೇಕು.
* ಎಲ್ಲ ಅಧ್ಯಯನ ವರದಿಗಳನ್ನು ಸಾರ್ವಜನಿಕರ ಮುಂದಿಟ್ಟು ಜನಾಭಿಪ್ರಾಯ ಪಡೆಯಬೇಕು.
ಇದು ಅಭಿವೃದ್ಧಿಯ ವಿರೋಧವಲ್ಲ. ಅವೈಜ್ಞಾನಿಕ ನಿರ್ಧಾರಗಳ ವಿರೋಧ.
ಇದು ಉತ್ತರ ಕರ್ನಾಟಕದ ಜನರ ವಿರೋಧವಲ್ಲ. ನದಿಗಳ ಸಹಜ ಅಸ್ತಿತ್ವವನ್ನು ಉಳಿಸಬೇಕೆಂಬ ಹೋರಾಟ.

🪔 ಈ ದೀಪಾವಳಿಯ ನಮ್ಮ ಸಂಕಲ್ಪ.

ನಮ್ಮ ಮನೆಗಳಲ್ಲಿ ನೂರು ಹಣತೆಗಳನ್ನು ಹಚ್ಚೋಣ. ಆದರೆ ನಮ್ಮ ನದಿಗಳಲ್ಲಿ ಹರಿಯುವ ಒಂದು ಹನಿಯ ನೀರಿನ ಮಹತ್ವವನ್ನೂ ಮರೆಯಬಾರದು.
ಹಣತೆಯ ಬೆಳಕು ಒಂದು ರಾತ್ರಿ ಇರುತ್ತದೆ. ನದಿಯ ಬೆಳಕು ಸಾವಿರಾರು ವರ್ಷಗಳ ಜೀವಜಗತ್ತಿಗೆ ಬದುಕು ನೀಡುತ್ತದೆ.

ಇಂದು ಬೇಡ್ತಿ ನದಿಯ ಪರವಾಗಿ ಮಾತನಾಡದಿದ್ದರೆ, ನಾಳೆ ನಮ್ಮ ಮಕ್ಕಳಿಗೆ ನದಿಯ ಕಥೆ ಹೇಳುವ ಪರಿಸ್ಥಿತಿ ಬರಬಾರದು.ನದಿಗಳು ನಮ್ಮ ಪೂರ್ವಜರು ನಮಗೆ ಬಿಟ್ಟುಹೋದ ಆಸ್ತಿ ಮಾತ್ರವಲ್ಲ. ಮುಂದಿನ ಪೀಳಿಗೆಯಿಂದ ನಾವು ಪಡೆದಿರುವ ಜವಾಬ್ದಾರಿ.
ನಮಗೆ ನದಿಯ ಮೇಲೆ ಅಧಿಕಾರವಿಲ್ಲ; ನದಿಯನ್ನು ಉಳಿಸುವ ಹೊಣೆಗಾರಿಕೆ ಇದೆ.

ಈ ದೀಪಾವಳಿಯಲ್ಲಿ ಒಂದು ಹಣತೆಯನ್ನು ಬೇಡ್ತಿ ನದಿಯ ಹೆಸರಿನಲ್ಲಿ ಬೆಳಗಿಸೋಣ. ಆ ಹಣತೆಯ ಬೆಳಕು ನಮ್ಮ ಮನಸ್ಸಿನಲ್ಲಿ ಪ್ರಕೃತಿ ಸಂರಕ್ಷಣೆಯ ಸಂಕಲ್ಪವನ್ನು ಮೂಡಿಸಲಿ.

ಬೇಡ್ತಿ–ವರದಾ ನದಿ ಜೋಡಣೆ ಬೇಡ!
ಅಘನಾಶಿನಿ–ವೇದಾವತಿ ನದಿ ಜೋಡಣೆ ಬೇಡ!
ಬೇಡ್ತಿ ನದಿ ಉಳಿಸಿ – ಪಶ್ಚಿಮ ಘಟ್ಟ ಉಳಿಸಿ – ಉತ್ತರ ಕನ್ನಡದ ಅಸ್ತಿತ್ವ ಉಳಿಸಿ!

ನಮ್ಮ ನದಿಗಳು ತುಂಬಿ ಹರಿಯಲಿ, ಕಾಡುಗಳು ಹಸಿರಾಗಿರಲಿ, ಬೆಟ್ಟಗಳು ಸುರಕ್ಷಿತವಾಗಿರಲಿ, ನಮ್ಮ ಊರುಗಳು ಅಭಿವೃದ್ಧಿಯಾಗಲಿ. ಪ್ರಕೃತಿಯ ಜೊತೆಗಿನ ಸಹಬಾಳ್ವೆಯೇ ನಮ್ಮ ನಿಜವಾದ ಸಮೃದ್ಧಿಯಾಗಲಿ.
ಎಲ್ಲರಿಗೂ ಪರಿಸರಸ್ನೇಹಿ, ನೆಮ್ಮದಿಯ ಮತ್ತು ಅರ್ಥಪೂರ್ಣ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಜಾಹೀರಾತುAdvertisement

📢 ಸಂಪಾದಕೀಯ ತಿದ್ದುಪಡಿ ಮತ್ತು ಸ್ಪಷ್ಟೀಕರಣ:

ಈ ಸುದ್ದಿಯಲ್ಲಿ ತಪ್ಪು ಕಂಡುಬಂದರೆ ನಮ್ಮ ಸಂಪಾದಕೀಯ ತಂಡಕ್ಕೆ ತಿಳಿಸಿ, ನಾವು ಸರಿಪಡಿಸುತ್ತೇವೆ. ಇಮೇಲ್ ಮಾಡಿ: news@sirwar360.in ಅಥವಾ ಕರೆ ಮಾಡಿ: +91 94480 36036.

Comments (0)

Join or log in to comment.

    ನಮ್ಮ ವಾಟ್ಸಾಪ್ ಗುಂಪಿಗೆ ಸೇರಿ

    ತಾಜಾ ಸುದ್ದಿ ಮೊದಲು ನಿಮ್ಮ ಮೊಬೈಲ್‌ಗೆ.

    ಕ್ಷಣ ಕ್ಷಣದ ಸುದ್ದಿಸಂಪೂರ್ಣ ಉಚಿತವರದಿಗಾರರ ನೇರ ಅಪ್‌ಡೇಟ್
    ಈಗ ಸೇರಿ