ಸಿರವಾರದಲ್ಲಿ ಸರ್ವೋದಯ ಪತ್ತಿನ ಸಹಕಾರ ಸಂಘ ಉದ್ಘಾಟನೆ
Sirwar360

ಸಿರವಾರ : ಪಟ್ಟಣದಲ್ಲಿ ಸರ್ವೋದಯ ಪತ್ತಿನ ಸಹಕಾರ ಸಂಘವನ್ನು ಮಂಗಳವಾರ ಶ್ರೀಗಳು ಉದ್ಘಾಟಿಸಿದರು.
ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿಯವರು ಕುಲ ಕಸುಬು ಆಧಾರಿತ ಸಣ್ಣ ಸಣ್ಣ ವ್ಯಾಪಾರಸ್ಥರು, ರೈತರು, ಸಣ್ಣ ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ಉತ್ತಮ ಆರ್ಥಿಕ ಸೇವೆ ಒದಗಿಸುವ ಮೂಲಕ ಜನರ ಅಭಿವೃದ್ಧಿಗೆ ಶ್ರಮಿಸಲಿ. ಸೌಹಾರ್ದ ಸಹಕಾರಿ ಸಂಘಗಳು ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುತ್ತದೆ. ಸಮಾಜಮುಖಿಯಾದ ಕೆಲಸಗಳನ್ನು ಮಾಡುವುದರ ಜೊತೆಗೆ ಆರ್ಥಿಕತೆಗೂ ಸಹಾಯ ಮಾಡುತ್ತದೆ. ನೂತನ ಸಹಕಾರಿಯು ಬಡವರಿಗೆ ಸಹಕಾರಿಯಾಗಲಿ ಎಂದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜ್ಯೋತಿ ಅಕ್ಕನವರು, ಸಹಕಾರಿಯ ಅಧ್ಯಕ್ಷ ಎನ್.ಉದಯಕುಮಾರ ಸಾಹುಕಾರ, ಉಪಾಧ್ಯಕ್ಷ ಎನ್ ಬಿ ಶಿವುಕುಮಾರ ಸಾಹುಕಾರ, ನಿರ್ದೇಶಕರಾದ ಆರ್ ಕೆ ಬಸವರಾಜ, ವೀರನಗೌಡ ಕಪಗಲ್, ಮಹೇಶ ಹಿರೇಮಠ, ನೀಲಗಲ್ ವೀರೇಶ ಸಾಹುಕಾರ, ಸೂಗಪ್ಪ ಹೂಗಾರ, ಕಲ್ಲೂರು ಬಸವರಾಜ ನಾಯಕ, ಶರಣಬಸವ ಮರಾಠ, ಪರಶುರಾಮ ಸರೋದೆ, ಎಂ.ಪ್ರಕಾಶಪ್ಪ, ಲಿಂಗಣ್ಣ ಮಸೀದಪುರು, ನೀಲಗಲ್ ಚಂದ್ರು ಸಾಹುಕಾರ, ಪಲ್ಲವಿ ಕಲ್ಮಲಾ ಬಸವರಾಜ, ವೆಂಕಟಲಕ್ಷ್ಮಿ ಮುರಳೀಕೃಷ್ಣ, ವ್ಯವಸ್ಥಾಪಕರಾದ ಗೋಪಾಲ ನಾಯಕ ಹಾಗು ಸಿಬ್ಬಂದಿಗಳು ಇದ್ದರು.

Mahesh Patil ✔
MA Journalism ,Freelancer
📢 ಸಂಪಾದಕೀಯ ತಿದ್ದುಪಡಿ ಮತ್ತು ಸ್ಪಷ್ಟೀಕರಣ:
ಈ ಸುದ್ದಿಯಲ್ಲಿ ತಪ್ಪು ಕಂಡುಬಂದರೆ ನಮ್ಮ ಸಂಪಾದಕೀಯ ತಂಡಕ್ಕೆ ತಿಳಿಸಿ, ನಾವು ಸರಿಪಡಿಸುತ್ತೇವೆ. ಇಮೇಲ್ ಮಾಡಿ: news@sirwar360.in ಅಥವಾ ಕರೆ ಮಾಡಿ: +91 9164447989.

