ಒನಕೆ ಓಬವ್ವಳ ಧೈರ್ಯ, ಶೌರ್ಯವನ್ನು ಮೈಗೂಡಿಸಿಕೊಳ್ಳಬೇಕು: ಅಶೋಕ ಪವಾರ್
Credit : ಸಿರವಾರ ಸಿರಿವಾಣಿ

ಸಿರವಾರ, ನ.11: ವೀರವನಿತೆ ಒನಕೆ ಓಬವ್ವಳ ಸಮಯಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ಇಂದಿನ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿವೆ. ಪ್ರತಿಯೊಬ್ಬರೂ ಓಬವ್ವಳ ಧೈರ್ಯ ಮತ್ತು ಶೌರ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಅಶೋಕ ಪವಾರ್ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.
ಚಿತ್ರದುರ್ಗದ ಇತಿಹಾಸದಲ್ಲಿ ಒನಕೆ ಓಬವ್ವ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಎದುರಾಳಿ ಸೈನಿಕರು ಕೋಟೆಯನ್ನು ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮನೆಯಲ್ಲಿದ್ದ ಒನಕೆಯನ್ನೇ ಆಯುಧವನ್ನಾಗಿ ಮಾಡಿಕೊಂಡು ಶತ್ರು ಸೈನಿಕರನ್ನು ಎದುರಿಸಿ ಕೋಟೆಯನ್ನು ರಕ್ಷಿಸಿದ ಅವರ ಸಾಹಸ ಇಂದಿಗೂ ಸ್ಮರಣೀಯವಾಗಿದೆ. ಇಂತಹ ವೀರನಾರಿಯ ಇತಿಹಾಸ ಮತ್ತು ಸಾಧನೆಗಳನ್ನು ಎಲ್ಲೆಡೆ ಪರಿಚಯಿಸುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಅವರ ಧೈರ್ಯ, ಸಾಹಸ ಮತ್ತು ಸಮಯಪ್ರಜ್ಞೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್, ಶಿರಸ್ತೇದಾರರಾದ ಜುಬೇರ್ ಸಾಬ್, ಫಕ್ರುದ್ದೀನ್, ಕಂದಾಯ ನಿರೀಕ್ಷಕ ಶ್ರೀನಾಥ್, ಎಫ್‌ಡಿಎ ಈರೇಶ್, ಅಮರ್, ಸಮಾಜದ ಮುಖಂಡರಾದ ಲಂಕೇಶ್ ಮರಾಟ, ಮಲ್ಲಯ್ಯ, ಗುರಪ್ಪ, ಹನುಮೇಶ್, ರಮೇಶ್, ಮೌನೇಶ್, ಶಶಿಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Mahesh Patil ✔
MA Journalism ,Freelancer
📢 ಸಂಪಾದಕೀಯ ತಿದ್ದುಪಡಿ ಮತ್ತು ಸ್ಪಷ್ಟೀಕರಣ:
ಈ ಸುದ್ದಿಯಲ್ಲಿ ತಪ್ಪು ಕಂಡುಬಂದರೆ ನಮ್ಮ ಸಂಪಾದಕೀಯ ತಂಡಕ್ಕೆ ತಿಳಿಸಿ, ನಾವು ಸರಿಪಡಿಸುತ್ತೇವೆ. ಇಮೇಲ್ ಮಾಡಿ: news@sirwar360.in ಅಥವಾ ಕರೆ ಮಾಡಿ: +91 9164447989.
ಸಂಬಂಧಿತ ಸುದ್ದಿಗಳು
Sirwarಸಿರವಾರದಲ್ಲಿ ಬುದ್ಧ ಪ್ರಜ್ಞಾ ಸಮೂಹದಿಂದ ಧಮ್ಮ ದೀಪಾ ದಾನೋತ್ಸವ ಆಚರಣೆ
ಸಿರವಾರ: ರಾಯಚೂರು ಜಿಲ್ಲೆಯ ಬುದ್ಧ ಪ್ರಜ್ಞಾ ಸಮೂಹ ಸಿರವಾರ ತಾಲೂಕು ವತಿಯಿಂದ ಮಂಗಳವಾರ ಸಂಜೆ ಸಿರವಾರದ ವಿದ್ಯಾನಗರದಲ್ಲಿ ಧಮ್ಮ ದೀಪಾ ದಾನೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ…
Sirwarಸಿರವಾರದಲ್ಲಿ ಸರ್ವೋದಯ ಪತ್ತಿನ ಸಹಕಾರ ಸಂಘ ಉದ್ಘಾಟನೆ
ಸಿರವಾರ : ಪಟ್ಟಣದಲ್ಲಿ ಸರ್ವೋದಯ ಪತ್ತಿನ ಸಹಕಾರ ಸಂಘವನ್ನು ಮಂಗಳವಾರ ಶ್ರೀಗಳು ಉದ್ಘಾಟಿಸಿದರು. ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ…

