ಬ್ರೇಕಿಂಗ್
ಮಾರುಕಟ್ಟೆ ದರ
🪙ಚಿನ್ನ 24K (10 ಗ್ರಾಂ):₹143560+150•
💍ಚಿನ್ನ 22K (10 ಗ್ರಾಂ):₹131740+140•
🥈ಬೆಳ್ಳಿ (1 ಕೆಜಿ):₹2,04,900-100•
⛽ಪೆಟ್ರೋಲ್ (ರಾಯಚೂರು):₹112.7-0.07•
🛢️ಡೀಸೆಲ್ (ರಾಯಚೂರು):₹100.07+0.12•
📈ಸೆನ್ಸೆಕ್ಸ್:81,106+107•
📊ನಿಫ್ಟಿ 50:25,044+58•
💵ಡಾಲರ್ (USD):₹93.68+28•
🪙ಚಿನ್ನ 24K (10 ಗ್ರಾಂ):₹143560+150•
💍ಚಿನ್ನ 22K (10 ಗ್ರಾಂ):₹131740+140•
🥈ಬೆಳ್ಳಿ (1 ಕೆಜಿ):₹2,04,900-100•
⛽ಪೆಟ್ರೋಲ್ (ರಾಯಚೂರು):₹112.7-0.07•
🛢️ಡೀಸೆಲ್ (ರಾಯಚೂರು):₹100.07+0.12•
📈ಸೆನ್ಸೆಕ್ಸ್:81,106+107•
📊ನಿಫ್ಟಿ 50:25,044+58•
💵ಡಾಲರ್ (USD):₹93.68+28•

ಸಿರವಾರದಲ್ಲಿ ಬುದ್ಧ ಪ್ರಜ್ಞಾ ಸಮೂಹದಿಂದ ಧಮ್ಮ ದೀಪಾ ದಾನೋತ್ಸವ ಆಚರಣೆ

Credit : ಸಿರವಾರ ಸಿರವಾಣಿ

Mahesh Patil ✔•ನವೆಂ 11,2026, 03:50 PM
👁36 ವೀಕ್ಷಣೆ1 ನಿಮಿಷ ಓದು
ಸಿರವಾರದಲ್ಲಿ ಬುದ್ಧ ಪ್ರಜ್ಞಾ ಸಮೂಹದಿಂದ ಧಮ್ಮ ದೀಪಾ ದಾನೋತ್ಸವ ಆಚರಣೆ

ಸಿರವಾರ: ರಾಯಚೂರು ಜಿಲ್ಲೆಯ ಬುದ್ಧ ಪ್ರಜ್ಞಾ ಸಮೂಹ ಸಿರವಾರ ತಾಲೂಕು ವತಿಯಿಂದ ಮಂಗಳವಾರ ಸಂಜೆ ಸಿರವಾರದ ವಿದ್ಯಾನಗರದಲ್ಲಿ ಧಮ್ಮ ದೀಪಾ ದಾನೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕ ಚನ್ನಬಸವ ಸಿರವಾರ ಅವರು, ಭಗವಾನ್ ಬುದ್ಧರು ಜ್ಞಾನೋದಯದ ನಂತರ ಸುಮಾರು 18 ವರ್ಷಗಳ ಬಳಿಕ ಮೊದಲ ಬಾರಿಗೆ ಕಪಿಲವಸ್ತುವಿಗೆ ಆಗಮಿಸಿದ ಸಂದರ್ಭದಲ್ಲಿ ಅಲ್ಲಿನ ಲಕ್ಷಾಂತರ ಜನರು ಕೈಯಲ್ಲಿ ದೀಪಗಳನ್ನು ಹಿಡಿದು ಜ್ಞಾನದ ಬೆಳಕಿನ ಮಾರ್ಗ ತೋರಿದ ಬುದ್ಧರನ್ನು ಸ್ವಾಗತಿಸಿದರು ಎಂದು ತಿಳಿಸಿದರು.

ಅದೇ ರೀತಿ, ಸಾಮ್ರಾಟ್ ಅಶೋಕರು ಭಾರತದಾದ್ಯಂತ ಸುಮಾರು 84 ಸಾವಿರ ಬೌದ್ಧ ಸ್ತೂಪಗಳನ್ನು ನಿರ್ಮಿಸಿ, ಕಾರ್ತಿಕ ಮಾಸದ ಈ ವಿಶೇಷ ದಿನದಂದು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಂದಿನಿಂದ ಬೌದ್ಧ ಸಮುದಾಯದಲ್ಲಿ ದೀಪ ಬೆಳಗಿಸುವ ಈ ಸಂಪ್ರದಾಯಕ್ಕೆ ವಿಶೇಷ ಮಹತ್ವ ಬಂದಿದೆ. ದೀಪಾವಳಿಯನ್ನು ಜ್ಞಾನದ ಬೆಳಕಿನ ಹಬ್ಬವಾಗಿ ಆಚರಿಸುವ ಪರಂಪರೆ ಬೆಳೆದು ಬಂದಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಗುರಪ್ಪ, ಶ್ರೀ ರಮೇಶ, ಶ್ರೀಕಾಂತ್, ಮೇಷಕ್, ಮಲ್ಲಯ್ಯ ಸೇರಿದಂತೆ ವಿದ್ಯಾನಗರ ಕಾಲೋನಿಯ ಧಮ್ಮ ಶಾಲೆಯ ಮಕ್ಕಳು, ಧಮ್ಮ ಉಪಾಸಕರು, ಸ್ಥಳೀಯ ಸಾರ್ವಜನಿಕರು ಹಾಗೂ ಸಿರವಾರ ತಾಲೂಕಿನ ವಿವಿಧ ವಾರ್ಡ್‌ಗಳ ಧಮ್ಮ ಉಪಾಸಕರು ಭಾಗವಹಿಸಿದ್ದರು.

ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Mahesh Patil

Mahesh Patil ✔

MA Journalism ,Freelancer

Powered by KarunadaNews.in

ಜಾಹೀರಾತುAdvertisement

📢 ಸಂಪಾದಕೀಯ ತಿದ್ದುಪಡಿ ಮತ್ತು ಸ್ಪಷ್ಟೀಕರಣ:

ಈ ಸುದ್ದಿಯಲ್ಲಿ ತಪ್ಪು ಕಂಡುಬಂದರೆ ನಮ್ಮ ಸಂಪಾದಕೀಯ ತಂಡಕ್ಕೆ ತಿಳಿಸಿ, ನಾವು ಸರಿಪಡಿಸುತ್ತೇವೆ. ಇಮೇಲ್ ಮಾಡಿ: news@sirwar360.in ಅಥವಾ ಕರೆ ಮಾಡಿ: +91 9164447989.

Comments (0)

Join or log in to comment.

    ನಮ್ಮ ವಾಟ್ಸಾಪ್ ಗುಂಪಿಗೆ ಸೇರಿ

    ಈಗ ಸೇರಿ