ಬಿ.ವಿ. ನಾಯಕ ಅವರ ಜನ್ಮದಿನ ಸರಳವಾಗಿ ಆಚರಣೆ: ರೋಗಿಗಳಿಗೆ ಹಣ್ಣು ವಿತರಣೆ

ಸಿರವಾರ: ಮಾಜಿ ಸಂಸದ ಬಿ.ವಿ. ನಾಯಕ ಅವರ ಜನ್ಮದಿನವನ್ನು ಅವರ ಅಭಿಮಾನಿ ಬಳಗದ ವತಿಯಿಂದ ಸರಳವಾಗಿ ಆಚರಿಸಲಾಯಿತು.
ಈ ನಿಮಿತ್ತ ಇಂದು ಸಿರವಾರದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅಭಿಮಾನಿ ಕೆ. ರಾಘವೇಂದ್ರ ಖಾಜನಗೌಡ ಅವರ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣುಗಳನ್ನು ವಿತರಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಜಕ್ಕಲದಿನ್ನಿ, ನರಸಿಂಹರಾವ ಕುಲಕರ್ಣಿ, ಅಮರೇಶ ಗಡ್ಲ, ಉಮಾಶಂಕರ ಜೇಗರಕಲ್, ನಾಗೇಶ ನಾಯಕ, ಭರತ ನಾಯಕ, ರಾಜಗೋಪಾಲ ನಾಯಕ, ವೀರನಗೌಡ ಗಣದಿನ್ನಿ, ಮೌಲಾಸಾಬ ಗಣದಿನ್ನಿ, ಮಾರೇಪ್ಪ, ವೆಂಕಟೇಶ ಸಕ್ರಿ, ಡಾ. ಯಲ್ಲಪ್ಪ, ಮಲ್ಲಿಕಾರ್ಜುನ ಸಿಕಂಟಿ, ಹನುಮೇಶ ಸಾಕಾಪುರ, ನಾಗೇಶ ನವಲಕಲ್, ಆಂಜನೇಯ್ಯ ಪೂಜಾರಿ, ಮಂಜುನಾಥ, ಗುರುಬಸವ ಗೋಲದಿನ್ನಿ, ಮಿಥುನ್ ಚ್ಯಾಗಿ, ಅನೀಲ್ ಸೂರಪ್ಪ, ತಾಯಣ್ಣ, ರಾಜು ಸೇರಿದಂತೆ ಅಭಿಮಾನಿ ಬಳಗದ ಸದಸ್ಯರು, ಬಿಜೆಪಿ ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.

Mahesh Patil ✔
MA Journalism ,Freelancer
📢 ಸಂಪಾದಕೀಯ ತಿದ್ದುಪಡಿ ಮತ್ತು ಸ್ಪಷ್ಟೀಕರಣ:
ಈ ಸುದ್ದಿಯಲ್ಲಿ ತಪ್ಪು ಕಂಡುಬಂದರೆ ನಮ್ಮ ಸಂಪಾದಕೀಯ ತಂಡಕ್ಕೆ ತಿಳಿಸಿ, ನಾವು ಸರಿಪಡಿಸುತ್ತೇವೆ. ಇಮೇಲ್ ಮಾಡಿ: news@sirwar360.in ಅಥವಾ ಕರೆ ಮಾಡಿ: +91 9164447989.
ಸಂಬಂಧಿತ ಸುದ್ದಿಗಳು
Sirwarಒನಕೆ ಓಬವ್ವಳ ಧೈರ್ಯ, ಶೌರ್ಯವನ್ನು ಮೈಗೂಡಿಸಿಕೊಳ್ಳಬೇಕು: ಅಶೋಕ ಪವಾರ್
ಸಿರವಾರ, ನ.11: ವೀರವನಿತೆ ಒನಕೆ ಓಬವ್ವಳ ಸಮಯಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ಇಂದಿನ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿವೆ. ಪ್ರತಿಯೊಬ್ಬರೂ ಓಬವ್ವಳ ಧೈರ್ಯ ಮತ್ತು ಶೌರ್ಯವನ್ನು…
Sirwarಸಿರವಾರದಲ್ಲಿ ಬುದ್ಧ ಪ್ರಜ್ಞಾ ಸಮೂಹದಿಂದ ಧಮ್ಮ ದೀಪಾ ದಾನೋತ್ಸವ ಆಚರಣೆ
ಸಿರವಾರ: ರಾಯಚೂರು ಜಿಲ್ಲೆಯ ಬುದ್ಧ ಪ್ರಜ್ಞಾ ಸಮೂಹ ಸಿರವಾರ ತಾಲೂಕು ವತಿಯಿಂದ ಮಂಗಳವಾರ ಸಂಜೆ ಸಿರವಾರದ ವಿದ್ಯಾನಗರದಲ್ಲಿ ಧಮ್ಮ ದೀಪಾ ದಾನೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ…
Sirwarಸಿರವಾರದಲ್ಲಿ ಸರ್ವೋದಯ ಪತ್ತಿನ ಸಹಕಾರ ಸಂಘ ಉದ್ಘಾಟನೆ
ಸಿರವಾರ : ಪಟ್ಟಣದಲ್ಲಿ ಸರ್ವೋದಯ ಪತ್ತಿನ ಸಹಕಾರ ಸಂಘವನ್ನು ಮಂಗಳವಾರ ಶ್ರೀಗಳು ಉದ್ಘಾಟಿಸಿದರು. ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ನವಲಕಲ್ಲು ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ…

